ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Monday 7 November 2011

ನನ್ನಪ್ಪ



ಹುಟ್ಟು ಶ್ರೀಮಂತನಲ್ಲ ನನ್ನಪ್ಪ
ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಲಿಲ್ಲ
ಬದುಕಿರುವುದೂ ತೀರಾ ಸರಳವಾಗಿಯೇ
ಎಲ್ಲಾ ತಂದೆಯಂದಿರೂ ಹೇಳುತ್ತಾರೆ,
"ಅಸಾಮಾನ್ಯನಾಗು ಕಂದ",
ನನ್ನಪ್ಪ ನನಗೆ ಕಲಿಸಿದ್ದು,
"ಎಲ್ಲರೊಳಗೊಂದಾಗು ಕಂದ"
ಸಾಮಾನ್ಯರಲ್ಲಿ ಸಾಮಾನ್ಯ ನನ್ನಪ್ಪ...

ನನ್ನಪ್ಪ ನಮಗಾಗಿ ಮಾಡಲಿಲ್ಲ
ಲಕ್ಷಗಟ್ಟಲೆ ಹಣ, ಎರಡೆರಡು ಬಂಗಲೆ,
ಹತ್ತು ಎಕರೆ ಜಮೀನು...
ಆತ ತೋರಿಸಿಕೊಟ್ಟಿದ್ದು ಸಹಜವಾಗಿ
ಜೀವನ ರೂಪಿಸಿಕೊಳ್ಳುವ ಕಲೆ,
ಸರಳತೆಯಲ್ಲಿ ಸಹಜತೆ,
ಸಹಜತೆಯೇ ಬದುಕಿನ ದಾರಿ...

ನನ್ನಪ್ಪ ಎಲ್ಲರನ್ನೂ ಆದರಿಸುವ
ಕರುಣಾಮಯಿ, ಕಷ್ಟವೆಂದರೆ
ಕರಗಿ ನೀರಾಗುವ ಹೆಣ್ಣು ಹೃದಯಿ...
ಹಾಗೆಂದು ಸಹಾಯ ಮಾಡಿಸಿಕೊಂಡವರೆಲ್ಲ
ಅವರನ್ನು ನೆನೆಯಲಿಲ್ಲ,
ಆದರೆ ಅಪ್ಪ ಕೊಂಚವೂ ಬೇಸರಿಸಲಿಲ್ಲ...
ಈಗಲೂ ಅವರು ಕೊಡುಗೈ ದಾನಿಯೇ,
ಇರುವುದೆಲ್ಲವನು ಕೊಡುವ ಕರ್ಣ...

ಎಷ್ಟೋ ಜನ ಅಂದಿದ್ದಿದೆ,
ನಿನ್ನಪ್ಪ ಯಾರ ಮಾತನ್ನೂ ಕೇಳದವ...
ಆದರೆ ಅಪ್ಪ ನಮಗೆ ಕಲಿಸಿದ್ದು
ಸ್ವಾಭಿಮಾನ, ಆತ್ಮಸ್ಥೈರ್ಯ, ಬದುಕಿನ ರೀತಿ...
ಕಲ್ಲಿನ ಹೃದಯವನ್ನೂ ಕರಗಿಸಿ
ಮಾತನಾಡಿಸಬಲ್ಲ ಮಾತಿನ ಮಲ್ಲ ನನ್ನಪ್ಪ,
ನಮಗೆ ಕೊಟ್ಟಿದ್ದು ಕೇವಲ
ಸಾಗರದಷ್ಟು ಪ್ರೀತಿ, ಮಮತೆ...

ಅಪ್ಪ ಕಲಿಸಿದ್ದು ಎಲ್ಲರನ್ನೂ ಪ್ರೀತಿಸುವುದು,
ಎಲ್ಲರೊಳಗೊಂದಾಗುವುದು...
ಮಮತಾಮಯಿ ನನ್ನಪ್ಪ,
ಎಂದೆಂದಿಗೂ ನನ್ನ ಹೀರೋ...

- ಪ್ರಸಾದ್.ಡಿ.ವಿ.

8 comments:

  1. ಅಪ್ಪನಿಗೊಂದು ಪ್ರೀತಿಯ ಉಡುಗೊರೆ..:))) <3

    ReplyDelete
  2. "ಅಪ್ಪ ನಮಗೆ ಕಲಿಸಿದ್ದು
    ಸ್ವಾಭಿಮಾನ, ಆತ್ಮಸ್ಥೈರ್ಯ, ಬದುಕಿನ ರೀತಿ...
    ಕಲ್ಲಿನ ಹೃದಯವನ್ನೂ ಕರಗಿಸಿ
    ಮಾತನಾಡಿಸಬಲ್ಲ ಮಾತಿನ ಮಲ್ಲ ನನ್ನಪ್ಪ,
    ನಮಗೆ ಕೊಟ್ಟಿದ್ದು ಕೇವಲ
    ಸಾಗರದಷ್ಟು ಪ್ರೀತಿ, ಮಮತೆ..."
    ಮನ ಮುಟ್ಟಿದ ಸಾಲುಗಳು..! :)
    ಹೆಚ್ಚು ಕಡಿಮೆ ನಮ್ಮ ತಂದೆಯವರ ಗುಣಾನೂ ಇದೇ ರೀತಿ..! :)
    ಅಪ್ಪನ ಕುರಿತು ಸುಂದರ ಕವಿತೆ..! :))
    ತುಂಬಾ ಸಂತೋಷವಾಯಿತು ನಿಮ್ಮೀ ಕವಿತೆ ಓದಿ..! :

    ReplyDelete
  3. ತುಂಬಾ ಚೆನ್ನಾಗಿದೆ. ಯಾರು ನಿಮ್ಮ ಆದರ್ಶ ವ್ಯಕ್ತಿ ಅನ್ನುವಂತಹಾ ಪ್ರಶ್ನೆಗೆ ಗೊತ್ತಿಲ್ಲದ, ಬರೀ ಕೇಳರಿತ ಹೆಸರನ್ನ ಹೇಳುವುದಕ್ಕಿಂತ 'ನನ್ನಪ್ಪ' ಅನ್ನುವುದು ಒಂದು ರೀತಿಯ ಹೆಮ್ಮೆ. ಎಷ್ಟೋ ಜನರಿಗೆ ದೌರ್ಭಾಗ್ಯವೂ ಕೂಡ ಆಗಿರುವುದು ಕಟು ಸತ್ಯ. ಅಪ್ಪನನ್ನ ಈ ರೀತಿ ಎಳೆ ಎಳೆಯಾಗಿ ನೆನಸಿದ್ದಕ್ಕೆ ಧನ್ಯವಾದ. ತುಂಬಾ ಸುಂದರವಾದ ನಿರೂಪಣೆ.

    ReplyDelete
  4. ಧನ್ಯವಾದಗಳು ಕವಿತೆಯನ್ನು ಮೆಚ್ಚಿದ್ದಕ್ಕೆ..:)) ಅಪ್ಪನೇ ಎಲ್ಲಾ ಮಕ್ಕಳಿಗೂ ಮೊದಲ ಆದರ್ಶ ಅಲ್ಲವೇ..:))

    ReplyDelete
  5. ಹುಟ್ಟು ಶ್ರೀಮಂತನಲ್ಲ ನನ್ನಪ್ಪ..,
    ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಲಿಲ್ಲ..
    ಬದುಕಿರುವುದೂ ತೀರಾ ಸರಳವಾಗಿಯೇ.,
    ಎಲ್ಲರ ತಂದೆಯರೂ ಹೇಳುತ್ತಾರೆ,
    "ಅಸಾಮಾನ್ಯನಾಗು ಕಂದ",
    ನನ್ನಪ್ಪ ನನಗೆ ಕಲಿಸಿದ್ದು,
    "ಎಲ್ಲರೊಳಗೊಂದಾಗು ಕಂದ"
    ಸಾಮಾನ್ಯರಲ್ಲಿ ಸಾಮಾನ್ಯ ನನ್ನಪ್ಪ...

    ವಾಹ್..! ಎಂಥಾ ಮಾತುಗಳು... ನಿಜವಾಗ್ಲು ತುಂಬಾ ಅರ್ಥಪೂರ್ಣವಾದ ಸಾಲುಗಳು... ನನ್ನಪ್ಪ ನನಗೆ ಹೇಳಿಕೊಟ್ಟಿದ್ದು ಕೂಡ ಅದನ್ನೆ..! ನನಗಾಗಿ ಉಳಿದಿರುವ ಒಂದೇ ಒಂದು ಆಸ್ತಿ ನನ್ನಪ್ಪ..! Love u so much pappa...

    ReplyDelete
  6. ಧನ್ಯವಾದಗಳು ದೀಪು..:)) ಅಪ್ಪನ ಪ್ರೀತಿ ಮೊಗೆದಷ್ಟು ಸಿಗುವ ಅಕ್ಷಯ ಪಾತ್ರೆ, ಅವರು ನಮ್ಮನ್ನು ಎಲ್ಲ ವಿಷಯಗಳಲ್ಲು ತಿದ್ದಲು ಪ್ರಯತ್ನಿಸುತ್ತಾರೆ, ಕೆಲವೊಮ್ಮೆ ದಂಡಿಸಿಯೂ ಇರಬಹುದು ಅದರಿಂದ ಮನಸ್ಸಿಗೆ ನೋವೂ ಆಗಿದ್ದಿರಬಹುದು ಆದರೆ ಅಪ್ಪನ ಉದ್ದೇಶ ಮಾತ್ರ ಮಕ್ಕಳ ವ್ಯಕ್ತಿತ್ವದ ಸರಿಯಾದ ವಿಕಸನ..:)) we are fortunate because in every stages of life we have him to guide, care and to love..:))

    ReplyDelete