ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday, 4 April 2015

ಪದ್ಯದ ಹಣತೆಗಳು


ಪದ್ಯದ ಹಣತೆಗಳು
ಮೆರವಣಿಗೆ ಹೊರಟಿವೆ,
ಹಿಡಿದವರಿಗೆ ಹಿಡಿಯಷ್ಟು,
ಕೊಂಡವರಿಗೆ ಕೊಡದಷ್ಟು,
ಹಿಡಿಗೂ ಸಿಕ್ಕದ,
ಕೊಡಕೂ ದಕ್ಕದ,
ನೋಡು, ನೋಡಲ್ಲಿ
ಪದ್ಯದ ಹಣತೆಗಳು!

ಕಲ್ಯಾಣಿಯಲಿ ಮೀಯದ
ದೀಪಗಳ ಸಾಲು ಸಾಲು
ಭಕುತಿಗೆ ಒಲಿಯದ ಬೆಳಕು,
ನೀಲಗಾರರ ಕಂಠಕ್ಕೆ,
ಮಂಟೆಸ್ವಾಮಿಯ ಪಾದಕ್ಕೆ,
ಮಾದಪ್ಪನ ಗದ್ದುಗೆಗೆ,
ಜನಪದರ ತಂಬೂರಿಗೆ,
ದಿಗ್ಗನೆ ಹತ್ತಿಕೊಂಡು
ಉರಿದಿವೆ,
ಪದ್ಯದ ಹಣತೆಗಳು
ಸರತಿ ಸಾಲಲ್ಲಿ
ಮೆರವಣಿಗೆ ಹೊರಟಿವೆ!

ಪದಗಳಲಿ ಶಬ್ಧ ಮಾಡಿ,
ಭಾವಗಳಲಿ ಶುದ್ಧ ಮಾಡಿ,
ಶೃತಿಗೆ ಬೇಡುವ
ಮಾನವೀಯತೆಯ ದೀಪದೊಳಗೆ
ಲೇಖನಿಯ ಬತ್ತಿ ಹಿಡಿದು
ಮೆರವಣಿಗೆ ಹೊರಟಿವೆ,
ಪದ್ಯದ ಹಣತೆಗಳು!

- ಮಂಜಿನ ಹನಿ

ಚಿತ್ರ ಕೃಪೆ: ಮದನ್.ಸಿ.ಪಿ.

1 comment:

  1. ಅಸಲು ಕವನಗಳು ಹೇಗಿರಬೇಕೆಂದು
    ತಿಳಿಸುತಿವೆ ಹೀಗೆ ಈ ಸಾಲುಗಳು:
    ’ಪದಗಳಲಿ ಶಬ್ಧ ಮಾಡಿ,
    ಭಾವಗಳಲಿ ಶುದ್ಧ ಮಾಡಿ’

    ReplyDelete