ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday 18 June 2014

ಪಾಪಿಯಾಗಬೇಕಿದೆ!


ಪಾಪಿಯಾಗಬೇಕು ನಾನು,
ಮನಸ್ಸನ್ನು ಮುಗುಮ್ಮಾಗಿ ಆವರಿಸುವ
ಪೋಲಿ ಕನಸುಗಳಿಗೆ
ಸಮಜಾಯಿಷಿ ಹೇಳಿ ಸಾಕಾಗಿದೆ!
ಹುಟ್ಟಿದೊಂದು ಕಲ್ಪನೆಯೂ
ಕಾರಿರುಳ ರಾತ್ರಿಯಲಿ
ಕರಗಿ ಕಣ್ಣೀರಾಗಿದೆ...
ಎದೆಗೆ ದಿಗಿಲು ಹತ್ತಿಸುವ
ನೋವುಗಳನು ಕತ್ತರಿಸಿ
ಬಿಸುಟು ನಾ ಪಾಪಿಯಾಗಬೇಕಿದೆ!

ಏರು ಜವ್ವನದ ಬಿಸಿಗೆ
ಮಳೆಗಾಲಕ್ಕೆ ನೂರು ಬೈಗುಳ;
ನಿದ್ರೆಯಲ್ಲೂ ಎಡೆಬಿಡದೆ
ಕಾಡುವ ಆಸೆಯೊಂದರ
ಕಣ್ಣಿಗೆ ನಿನ್ನದೇ ಕಾಡಿಗೆ...
ಅದೇನು, ತೊಂಡೆ ಹಣ್ಣುಗಳೆ
ತುಟಿಯಾದವೇನು?
ನೀ ಹೊದ್ದ ಕೆಂಪು ಪರದೆ ಸರಿಸಿ,
ನಿನ್ನಂದದ ಇಂಚಿಂಚನ್ನೂ
ಕಣ್ಣಿನಲ್ಲೇ ಕುಡಿದು ನಶೆಯೇರಬೇಕು;
ಅಂದವೆಂಬ ಸುರೆಯೊಂದು ಸಾಕು!

ಕನಸಿನಲ್ಲೂ ಆ ತುಂಬಿದೆದೆಗಳ
ಆಯಸ್ಕಾಂತದಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ,
ಮಡಿ-ಮೈಲಿಗೆಯ ಪೊರೆ ಕಳಚಿ
ನನ್ನನ್ನು ನಾ ಒಪ್ಪಿಸಿಕೊಳ್ಳಲಾಗುತ್ತಿಲ್ಲ,
ಪ್ರೇಮವೆಂದರೆ ಮೈ, ಮನಸು,
ಕಣ್ಣು, ಕನಸು, ಆತ್ಮದಣುವಣುವೂ
ಬೆರೆತು ಬೆವರಬೇಕಂತೆ,
ಸಂಭೋಗಕ್ಕೆ ತೊಡಗಿ ಹರಿಯಬೇಕಂತೆ;
ಉಳಿದೆಲ್ಲವೂ ಬೆರೆತಂತಾಗಿದೆ,
ಮೈಯೊಂದನು ಕಲಸಿ, ಬೆವರು ನೆನೆಸಬೇಕು...
ಕನಸಲ್ಲಾದರೂ ಒಮ್ಮೆ ಬೆತ್ತಲಾಗು,
ನಾನು ಪಾಪಿಯಾಗಬೇಕಿದೆ,
ಅಟ್ಲೀಸ್ಟು ಪ್ರೇಮಿಯಾಗಬೇಕಿದೆ!

--> ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

3 comments:

  1. ಇಷ್ಟವಾಯಿತು ಪ್ರಸಾದ್........:)

    ReplyDelete
  2. ಯಾವದನ್ನೂ ಮುಚ್ಚಿಟ್ಟಷ್ಟೂ ಮತ್ತೂ ಮನೋ ಕೊಳೆಯೇ!
    ಒಮ್ಮೆ ಭೋರ್ಗೆರೆದು ಬಿಟ್ಟರೆ, ಆ ಮೇಲೆ ಇದ್ದೇ ಇದೆ ಪುನೀತನಾಗುವ ಅವಕಾಶ.

    ReplyDelete