ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday, 16 February 2014

ಈ ವಾರಕ್ಕೊಂದಂತ್ಯ!


ಇದೆಂಥ ವಾರಾಂತ್ಯವೋ
ನಾ ಕಾಣೆ,
ನಿನ್ನೊಂದು ನೆನಪಿಲ್ಲ,
ಕನಸು ಕಣ್ಣು ಕೂಡಿಲ್ಲ...
ಸುಮ್ಮನೆ ಕತ್ತಲ ಹೊದ್ದು
ಬೆಳಕು ಕಣ್ಣು ಬಿಟ್ಟಿದ್ದೇ ಬಂತು,
ಸುಖವಿಲ್ಲ ವಾರಾಂತ್ಯಕೆ!
ಕತ್ತಲಾವರಿಸಿದೆ ಮತ್ತೆ ಮರುಗಿ!

ಇದೆಂಥ ವಾರಾಂತ್ಯವೋ
ನಾ ಕಾಣೆ,
ಬೆಳಗಿಗೆ ಗುನುಗಿಲ್ಲ,
ಇರುಳಿಗೆ ನೆರಳಿಲ್ಲ,
ರಾತ್ರಿಗೆ ಮೈಥುನವಿಲ್ಲ,
ಮೈ ಬೆಚ್ಚಗಾಗಿಸುವ
ರತಿಯ ಸುಳಿವೂ ಇಲ್ಲ!
ಕಾಮನೆಗಳ ಕಂಬಳಿ ಹೊದಿಕೆ
ಸುಮ್ಮನೆ ಬಿದ್ದಿದೆ ದೂರದಲೆಲ್ಲೋ!

ಇದೆಂಥ ವಾರಾಂತ್ಯವೋ
ನಾ ಕಾಣೆ,
ಹೊಸದೊಂದು ಚಿಗುರಿಲ್ಲ,
ಹಳೆ ನೆನೆಕೆಗಳ ಕೊರೆವಿಲ್ಲ,
ಹರಿವಿಲ್ಲ ಮನದೊಳಗೆ,
ಒಂದು ಕಲ್ಲಾದರೂ ಬೀಳಬೇಡವೆ
ನಿಂತ ಕೊಳದೊಳಗೆ?!
ತಿಳಿಕೊಳವಾದರೆಂತು ಸುಖವೋ?
ಚಲನೆ ಬೇಕೆನುವ
ಸಂತ ನಾನು,
ಧೇನಿಸಿವುದೊಂದೇ ಪ್ರೇಮವನು!

- ಮಂಜಿನಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

1 comment:

  1. ಇಂತಹ ಸಹಸ್ರ ನಿರ್ವಿಕಾರದ ವಾರಾಂತ್ಯಗಳ ಬೇಸರಿಕೆ ನನ್ನ ಪಾಲಿನದೂ. ಆದರೆ ವಾಪ ಪೂರ್ತಿ ಕಾಯುವ ಕಾತುರಕ್ಕೆ ಪ್ರಾಪ್ತಿಯೊಂದು ಭಗವಂತನೂ ಕರುಣಿಸಬೇಕು! :(

    ReplyDelete