ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday 28 August 2013

ರಾಧೆ – ಕೃಷ್ಣ


ಹೆಣ್ಣಲ್ಲವೆ ರಾಧೆ ಪ್ರೀತಿಯ ಕಣ್ಣಲ್ಲವೆ?
ಎದೆಗಾತುಕೊಂಡರೂ ವಿರಹ
ಸುಮ್ಮನೆ ನಗಲಿಲ್ಲವೇ?
ಗೋಪಿಕೆಯರ ಗೊಲ್ಲನ
ಒಲವ ಪೂಜೆಯ ನೆಪದಿ
ತಾನೇ ಸೆಳೆದಪ್ಪಿಕೊಳಲಿಲ್ಲವೆ?

ಗಂಗಾ-ತುಂಗಾಕಾವೇರಿಯರಿಗಿಂತ
ಸುಸ್ಪಷ್ಟ ಚಲನೆ!
ಗಮ್ಯ ಮರೆಯದ ಪ್ರೇಮದ ಹೊನಲು,
ಇಕ್ಕೆಲದಿ ಸಿಕ್ಕ ನೆಲಕೆಲ್ಲ ಫಸಲು,
ಪ್ರೀತಿ ಅರಳಿ ಜಗವೆಲ್ಲ ನಗಲು!

ಪ್ರೀತಿ ಬಿತ್ತಿಪ್ರೀತಿ ಬೆಳೆಯುವಳವಳು
ಕೃಷ್ಣನೆಡೆಗಿನ ಹಾದಿಯ ಬೆಳಗು,
ಸುರಗಿಯ ಮೊಗ್ಗು, ಕಣ್ಣೊಳ ಬೆರಗು,
ಸುಗಂಧದ ಎಸಳು, ರಾಧೆ -
ಕೃಷ್ಣನ ಒಳಗಣ ಒಳಗು ಮತ್ತೂ ಬೆಳಗು!

ಪ್ರಸಾದ್.ಡಿ.ವಿ.

ಶ್ರೀ ಕೃಷ್ಣ ಜನ್ಮಾಷ್ಠಮಿಯ ಹಾರ್ದಿಕ ಶುಭಾಶಯಗಳು :-)

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

4 comments:

  1. ರಾಧೇಯ ಅಮಿತ ಪ್ರೇಮಾರ್ಪಣ ವ್ಯಕ್ತಿತ್ವದ ಅನಾವರಣ ಇಲ್ಲಿದೆ.
    ಮನ ಸೆಕೆದ ಹೊಸತು:
    " ಗಂಗಾ-ತುಂಗಾ, ಕಾವೇರಿಯರಿಗಿಂತ
    ಸುಸ್ಪಷ್ಟ ಚಲನೆ! "

    ReplyDelete
  2. ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ನಿಮ್ಮ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಒಂದು ಸುಂದರ ಕವನ.
    ನನ್ನ ಬ್ಲಾಗಿಗೂ ಭೇಟಿ ಕೊಡಿ.

    ReplyDelete
  3. ‘ಪ್ರೀತಿ ಬಿತ್ತಿ ಪ್ರೀತಿ ಬೆಳೆಯುತ್ತಾಳೆ’ .
    ರಾಧೆಯನ್ನು ಅರ್ಥೈಸಿದ ಪರಿ ಚೆನ್ನಾಗಿದೆ.
    ಬರೆಯುತ್ತಿರಿ

    ReplyDelete
  4. nice. ಜನ್ಮಾಷ್ಟಮಿ ಶುಭಾಶಯ

    ReplyDelete