ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday, 18 January 2012

ಎಲ್ಲಿರುವೆ ನೀ ಮಾಧವಾಮಾಧವನ ಕೊಳಲಿನ ನಾದಕ್ಕೆ
ನರ್ತಿಸುವ ನವಿಲಾದಳು ರಾಧೆ,
ಎಲ್ಲಿರುವೆ ಮಾಧವ ನೀ,
ಕೇಳದೆ ರಾಧೆಯ ಸಾಂಗತ್ಯ ಸುಧೆ...

ಮಾಧವನ ಗಾನ ಮಾಧುರ್ಯದಿ
ಮಂದಗಮನೆಯು ರಾಧೆ,
ಗಂಗೆಯಾಗಿ, ಯಮುನೆಯಾಗಿ, ಕಾವೇರಿಯಾಗಿ,
ಶರಧಿಯ ಸೇರುವ ತವಕದಿ,
ಮಾಧವನ ಸಾಮೀಪ್ಯವರಸುತಾ
ಗೊಲ್ಲ ಗೋಪನ ಸಾನಿಧ್ಯ
ಬಯಸಿಹಳು ಚಿರ ವಿರಹಿ ರಾಧೆ,
ಒಲಿಯಬಾರದೆ ರಾಧೆಗೊಪ್ಪಿ,
ಎಲ್ಲಿಹೋದೆ ಮಾಧವಾ ನೀ,
ಕೇಳದೆ ರಾಧೆಯ ವಿರಹ ಗೀತೆ...

ರಾಧೆ-ಮಾಧವರ ಕೊಳಲಿನಾಟ,
ಪ್ರೇಮಕ್ಕೊಂದು ದಿವ್ಯ ನೋಟ,
ಕೊಳಲ ಗೋಪ ಮಾಧವ,
ಅವನ ಗಾನಸುಧೆಗೆ ನವಿಲು ಅವಳು,
ಇದು ಪ್ರೀತಿಯೊ, ಪ್ರೇಮವೋ,
ಭಕ್ತಿಯೋ, ಮುಕ್ತಿಯೋ,
ಮಾಧವನಿಗೇ ಅವಳು ಸ್ವಂತವು,
ಪ್ರೇಮಕ್ಕೊಲಿದ ರಾಧೆಯವಳು
ಕರುಣೆ ಬಾರದೆ,
ಎಲ್ಲಿರುವೆ ನೀ ಮಾಧವಾ,
ಅವಳ ಅಳಲು ಕೇಳದೆ...

- ಪ್ರಸಾದ್.ಡಿ.ವಿ.

3 comments:

  1. This comment has been removed by a blog administrator.

    ReplyDelete
  2. ಮೂರ್ತಿ, ಕವನದಲ್ಲಿ ರಾಧೆಯ ಮೂಲಕ ಕೃಷ್ಣನನ್ನು ಹುಡುಕಿದ್ದೀರಿ. ಹಲವು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ನಿಮ್ಮ ವಿನೀತ ಭಾವವನ್ನು ಅವಲೋಕಿಸಿದ್ದೇನೆ. ನೆಮ್ಮದಿಯ-ಸಮೃದ್ಧ ಬದುಕು ನಿಮ್ಮದಾಗಲಿ, ಶುಭಾಶಯಗಳು.

    ReplyDelete
  3. ಕವಿತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಮನದ ಧನ್ಯವಾದಗಳು ಭಟ್ ಸರ್..:)))

    ReplyDelete