ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 9 August 2012

ಸದ್ದಿಲ್ಲದ ಸುವ್ವಾಲಿ



ಸದ್ದಿಲ್ಲದೆ ಕುಳಿತವಳು
ಸದ್ದು ಮಾಡುತ್ತಿದ್ದಾಳೆ,
ಸುದ್ದಿಯೇ ನೀಡದ
ಸ್ನಿಗ್ಧ ಮುಗ್ದತೆಯವಳು,
ನನ್ನವಳು ಅರಳಿದಳೆ?
ರಂಗವಲ್ಲಿಯ ವಲ್ಲಿ...
ನನ್ನೆದೆಯ ಬಾಂದಳದಿ
ಸದ್ದಿಲ್ಲದೇ ಸುವ್ವಾಲಿ..!

ಮೆಲ್ಲ-ಮೆಲ್ಲಗೆ ಮೈ
ಚಿವುಟಿಕೊಳ್ಳುತ್ತೇನೆ,
ಕನಸಲ್ಲೇ ಬಂದಳಾ?
ಎದುರಲ್ಲೆ ಬಂದಳಾ?
ಸದ್ದಿಲ್ಲದೆ ಹೋದವಳು,
ಸನ್ನೆಯಲ್ಲೇ ಕರೆದಳಾ?
ಕನಸೊಳಗಿನ ಕನಸೊಳಗೆ
ನನ್ನವಳ ಸುವ್ವಾಲಿ..!

ಕುಳಿತಲ್ಲಿಂದಲೇ ಇಲ್ಲೆ,
ಹಿಂದಿಂದೆ ಓಡುತ್ತೇನೆ,
ಜೊತೆಗಿಟ್ಟ ಹೆಜ್ಜೆಗಳು,
ನಿಮಿಷಾಂಬ ದೇವಳ,
ಸದ್ದು ಮಾಡಿದಾ ನಾಣ್ಯ,
ಮರೆವು ನುಂಗಲಾಗದ ನೆನಪು,
ಬದುಕೆಂಬ ಬಾಂದಳದಿ
ಬರಿದಾಗದು ಸುವ್ವಾಲಿ..!

- ಪ್ರಸಾದ್.ಡಿ.ವಿ.

1 comment:

  1. "ಸದ್ದಿಲ್ಲದೆ ಕುಳಿತವಳು
    ಸದ್ದು ಮಾಡುತ್ತಿದ್ದಾಳೆ,.."

    ಸದ್ದಿಲ್ಲದೇ ಸುದ್ದಿ ಮಾಡಿ, ನೆನಪುಗಳ ಮೂಟೆಯನ್ನು ನಿಮಗೆ ನೀಡಿರೋ ಪ್ರೀತಿಗೆ ಸಲಾಂ.. ಮುದ್ದಾದ ಪ್ರೇಮ ಕವಿತೆ...

    ReplyDelete