ನಾವು ಭಾರತೀಯರು,
ಸುರಿಸಿ ಕೋಡಿ ನೆತ್ತರು,
ಸ್ವಾತಂತ್ರ್ಯವನ್ನು ನಮ್ಮ
ಕೈಗಿತ್ತರು ಮಹಾತ್ಮರು, ಹುತಾತ್ಮರು...
ಭಗತ್ ಸಿಂಗ್, ಗಾಂಧೀಜಿ, ಶುಭಾಷ್ ಚಂದ್ರರು,
ಎಷ್ಟೆಷ್ಟೋ ಸ್ವತಂತ್ರವೀರರು,
ಭಾರತಮಾತೆಯ ಗರ್ಭಸಂಜಾತರು,
ಹೋರಾಟ, ನೋವಿನೊಂದಿಗೆ
ಜಯದ ಉಗಮವೆಂದು ಸಾರಿ ಹೋದರು...
ಆಧ್ಯಾತ್ಮದ ದೀವಿಗೆಯನ್ನು ಹೊತ್ತಿಸಿದರು
ನಮ್ಮ ಮುನಿ - ಋಷಿವರ್ಯರು,
ಪತಂಜಲಿ ಮೊದಲ ಯೋಗಗುರು,
ಗುರು ಪರಂಪರೆಯ
ಆರಂಭವೇ ದತ್ತಾತ್ರೇಯರು,
ಉದಾತ್ತ ಚಿಂತನೆಗಳು, ಜ್ಞಾನದ
ಕ್ರಿಯಾಶೀಲತೆಗೆ ನಮ್ಮದೇ ತವರು,
ನಮ್ಮವರೇ ಆರ್ಯಭಟ, ಭಾಸ್ಕರರು...
ಇಂತಹ ಪುಣ್ಯ ನೆಲದಲ್ಲಿ ಹುಟ್ಟಿದ
ನಾವುಗಳೇ ಪುಣ್ಯವಂತರು,
ನಮ್ಮೆಲ್ಲರಿಗೂ ಭಾರತಾಂಬೆಯದೇ
ಮಡಿಲು, ಬತ್ತದ ಒಡಲು...
ನೋವಿನಲ್ಲೇ ಹುಟ್ಟಿ-ಬೆಳೆದರೂ,
ನಮ್ಮನ್ನೇ ನಾವು ನಂಬಲಾಗದವರೇನು?
ನಾವು ಕೈಲಾಗದವರೆಂದುಕೊಂಡಿರೇನು?
ಭ್ರಷ್ಟ ರಾಜತಾಂತ್ರಿಕರೇ
ನೀವೂ ಭಾರತೀಯರಲ್ಲವೇನು?
ನಿಮ್ಮನ್ನೂ ಭಾರತಾಂಭೆ
ಹಾಲುಣಿಸಿ ಬೆಳೆಸಿಲ್ಲವೇನು?
ಉತ್ಕೃಷ್ಟ ಬೀಜಗಳನ್ನು ಭಿತ್ತಿದರೂ
ಕಳ್ಳಿ ಗಿಡವೇ ಬೆಳೆದೀತೇನು?
ಇದೇ ಕಡೆಯ ಎಚ್ಚರಿಕೆ ನಿಮಗಿನ್ನು,
ಶಾಂತಿಪ್ರಿಯತೆಯೇ ಸಂಕೋಲೆಯಲ್ಲ
ನಮಗೇನೂ, ನೆನಪಿಡಿ ನೀವಿನ್ನು...
ತಲೆಮಾರುಗಳು ಉರುಳಿದರೇನು?
ಕಿಚ್ಚು, ಆತ್ಮಶಕ್ತಿ ಕುಂದುವುದೇನು?
ಜ್ಞಾನದ ಒರತೆ, ಕ್ರಿಯಾಶೀಲತೆ ಬತ್ತುವುದೇನು?
ಮನೋಬಲ ಜೊತೆಗಿರೆ,
ಜಯದ ಹಾದಿ ದುರ್ಗಮವೇನು?
ನಮ್ಮನ್ನು ನಾವೇ ಗೆದ್ದರೆ
ಅಸಾಧ್ಯವಾದುದೇನು?
ನಂಬಿಕೆಯ ಅಸ್ತ್ರವಿಡಿದು ನಿಂತರೆ
ವೈರಿ ಪಡೆ ನಿಶ್ಶೇಷವಾಗುವವರೆಗೂ
ವಿರಮಿಸೆವು ನಾವಿನ್ನು,
ನಿಮಗಿದೋ ಕಟ್ಟ ಕಡೆಯ ಎಚ್ಚರಿಕೆ
ನಾವು ಭಾರತೀಯರು...
- ಪ್ರಸಾದ್.ಡಿ.ವಿ.
ನಾವು ಭಾರತೀಯರು...
ReplyDeleteನಂಬಿಕೆಯ ಅಸ್ತ್ರವಿಡಿದು ನಿಂತರೆ
ವೈರಿ ಪಡೆ ನಿಶ್ಶೇಷವಾಗುವವರೆಗೂ
ವಿರಮಿಸೆವು ನಾವಿನ್ನು...
ಸತ್ಯವಾದ ಮಾತುಗಳು..!
ಎಲ್ಲಿಯವರೆಗೆ ನಮ್ಮ ಜನ ಹೆಚ್ಚೆತ್ತುಕೊಳ್ಳುವುದಿಲ್ಲವೂ ಅಲ್ಲಿಯವರೆಗೂ ನಮ್ಮಿಂದ ಏನು ಸಾಧ್ಯ ಆಗಲಾರದು..!
ಹಾಗೆ ನಾವು ತಿರುಗಿ ನಿಂತರೆ ನಮ್ಮಿಂದ ಅಸಾಧ್ಯವಾದದ್ದು ಕೂಡ ಯಾವುದು ಇಲ್ಲಾ..!:)
ನಾವು ಭಾರತೀಯರಾಗಿ ಹುಟ್ಟಿರುವುದೇ ಹೆಮ್ಮೆಯ ಸಂಗತಿ ನಮಗೆಲ್ಲಾ..:):)
ವರ್ಣನೆ ಉತ್ತಮವಾಗಿದೆ ಪ್ರಸಾದ್..:)
ಧನ್ಯವಾದಗಳು ದೀಪು..:))) ಹೌದು ಮನಸ್ಸಿನಲ್ಲಿದ್ದ ದೇಶ ಪ್ರೇಮಕ್ಕೆ ಹೇಗಾದರೂ ಮಾಡಿ ಪದಗಳ ರೂಪ ಕೊಡಬೇಕೆಂದು ಪ್ರಯತ್ನಿಸಿದಾಗ ಹುಟ್ಟಿದ ಕವಿತೆ ಇದೆ.. ಇಂತಹ ಸಾತ್ವಿಕ ಭೂಮಿಯಲ್ಲಿ ಹುಟ್ಟಿದ ನಾವುಗಳೇ ಪುಣ್ಯವಂತರು.. ಶಕ್ತಿಶಾಲಿ ಬ್ರಿಟೀಷರನ್ನೇ ಬಡಿದು ಹೊರಗಟ್ಟಿದ ನಮಗೆ, ನಮ್ಮಲ್ಲೇ ಇರುವ ಹುಳುಕುಗಳು ಎಷ್ಟರವು? ಸವೆಸೇ ಬಿಡುವ ಅಭಿವೃದ್ದಿಯ ಹಾದಿಯನ್ನು ಎಷ್ಟೇ ದುರ್ಗಮವಿದ್ದರೂ.. ನಮ್ಮನ್ನು ನಾವೇ ಗೆದ್ದಮೇಲೆ ಅಸಾಧ್ಯವಾದುದು ಯಾವುದೂ ಇಲ್ಲ.. ಎಲ್ಲರೂ ನವಭಾರತದ ನಿರ್ಮಾಣಕ್ಕೆ ಶ್ರಮಿಸುವ ಔಚಿತ್ಯವನ್ನು ಇಲ್ಲಿ ಸಾರಲಾಗಿದೆ..:)))
ReplyDelete