ನಗುವಿತ್ತು ಮೊಗದಲ್ಲಿ
ದುಗುಡವಿತ್ತೋ ಮನದಲ್ಲಿ(?),
ನೀ ಬಂದೆ ಗೆಳತಿ ಬಾಳಲ್ಲಿ
ಮೊಗ್ಗರಳಿ ಕಂಪ ಬೀರಿತು,
ಹೂವು ನೀನು, ಅದರ ನೆರಳು ನಾನು,
ಹೂವ ಗಂಧ
ನೆರಳನ್ನೂ ಅಪ್ಪಿಕೊಂಡಿತ್ತು!
ಈಗಲೂ ಆಶ್ಚರ್ಯವೆನಿಸುತ್ತದೆ
ಅರಸಿದ್ದ ನನ್ನ ಕೈಹಿಡಿದೆ ನೀನು,
ಆದೆಂಥ ಆಪ್ಯಾಯಮಾನತೆ ಸ್ನೇಹಕ್ಕೆ,
ಚಿಕ್ಕ ಮಗುವಾಗಿದ್ದೆ ನಾನು,
ನನ್ನ ಅಮ್ಮ ನೀನು!
ಸಾವಿರಾರು ಹೊಂಗನಸುಗಳು
ಬಣ್ಣ ಕಟ್ಟಿಕೊಂಡವು,
ಅವುಗಳಲ್ಲಿ ನೀನಿಲ್ಲದೆಯೂ
ನನ್ನ ಕನಸುಗಳು ನಿನ್ನವಾದವು!
ಸ್ನೇಹಕ್ಕಷ್ಟು ತನ್ಮಯತೆಯೇ ಗೆಳತಿ,
ನೋವು-ನಲಿವು, ಕನಸುಗಳನ್ನು
ತಮ್ಮವೆಂದು ಪರಿಭಾವಿಸುವಷ್ಟು!?
ಒಂದಷ್ಟು ಶುಭ ಹಾರೈಕೆಗಳು ನಿನಗೆ:
ನಿನ್ನ ಮನದ ಹಾಲು ಬೆಳದಿಂಗಳು
ಬಾಳಿಗೂ ಬೆಳಕು ಚೆಲ್ಲಲಿ,
ದನಿಯಾದೇನು, ನಿನ್ನ ಗಂಟಲು ಕಟ್ಟಿದಾಗ,
ನಗುವಾದೇನು, ನಿನ್ನ ಕಣ್ಣೊರೆಸಲು,
ಮೆತ್ತನೆ ಹಾಸಿಗೆಯಾಗುವೆ
ಮನಸು ಮುದುಡಿದಾಗ!
ಇನ್ನೇನೂ ಬೇಡ ಗೆಳತಿ
ಈಗ ಕೊಟ್ಟಿರುವುದೇ ಸಾಕು,
ಸಾಲಗಾರನಾಗಿದ್ದೇನೆ!
ಇನ್ನು ನಾನು ಕೊಡುತ್ತೇನೆ
ನೀನು ಸುಮ್ಮನೆ ಸ್ವೀಕರಿಸು!
ಗೆಳೆಯ ನಾನು, ಗೆಳತಿ ನೀನು!
ಕೊಡುವುದಿದ್ದರೆ ಕೊಡು ಕಟ್ಟ ಕಡೆಗೆ
ಆ ನಿನ್ನ ಕಣ್ಣ ಹನಿಗಳನ್ನು
ಈ ನನ್ನ ಉಸಿರು ನಿಂತಾಗ, ಧನ್ಯ ನಾನು!
- ಪ್ರಸಾದ್.ಡಿ.ವಿ.
ಚಿತ್ರಕೃಪೆ: ಗೂಗಲ್ ಅಂತರ್ಜಾಲ
ಇದು ಒಂದು ನಿರ್ಮಲವಾದ ಸ್ನೇಹದ ಕುರುಹಾಗಿ ಬರೆದ ಕವನ, ನೀವುಗಳೂ ಆ ಭಾವವನ್ನು ಗುರುತಿಸಬಹುದೆಂದು ತಿಳಿದಿದ್ದೇನೆ..:)
ReplyDeletevery nice poem:)touching lines:)
ReplyDeletethank you so much for ur appreciation Prerana..:)))
ReplyDeleteಅಧ್ಬುತವಾದ ಸಾಲುಗಳು.., ನಿಜವಾಗಿಯೂ ಕಲ್ಮಶ ರಹಿತ ಮನಸ್ಸಿನ ನಿರ್ಮಲ ಸ್ನೇಹಕ್ಕೊಂದು ಅತ್ಯಧ್ಬುತ ಉದಾಹರಣೆ ಈ ಕವಿತೆ... ತುಂಬಾ ಚೆನ್ನಾಗಿದೆ ಪ್ರಸಾದ್..:):)
ReplyDeleteಧನ್ಯವಾದಗಳು ದೀಪು..:)) ಸ್ನೇಹ ನಾವು ಪಡೆದಂತಹ ಸುಂದರ ಉಡುಗೊರೆ.. ಯಾವ ರಕ್ತ ಸಂಬಂದಗಳೇ ಇಲ್ಲದೆ ಸ್ನೇಹಿತೆ/ಸ್ನೇಹಿತ ಕಷ್ಟದಲ್ಲಿದ್ದರೆ ಮನ ತುಡಿಯುತ್ತದೆ, ನಮ್ಮ ಕೈಯಲ್ಲಿ ಸಹಾಯ ಮಾಡಲು ಸಾಧ್ಯವಿರದಿದ್ದರೂ ಎಲ್ಲವೂ ಸರಿಯಾಗುತ್ತದೆ ಎಂಬ ಭರವಸೆಯನ್ನು ನೀಡುತ್ತದೆ..:)) ಆ ಅನುಬಂಧಕ್ಕೆ ಯಾರು ಬೆಲೆ ಕಟ್ಟಲಾದೀತು.. ಆ ನಿಷ್ಕಲ್ಮಶವಾದ ಸ್ನೇಹವನ್ನು ಪಡದರದೇ ಪೂರ್ವ ಜನ್ಮದ ಪುಣ್ಯ..:))
ReplyDeleteಈಗಲೂ ಆಶ್ಚರ್ಯವೆನಿಸುತ್ತದೆ
ReplyDeleteಅರಸಿದ್ದ ನನ್ನ ಕೈಹಿಡಿದೆ ನೀನು,
ಆದೆಂಥ ಆಪ್ಯಾಯಮಾನತೆ ಸ್ನೇಹಕ್ಕೆ,
ಚಿಕ್ಕ ಮಗುವಾಗಿದ್ದೆ ನಾನು,
ನನ್ನ ಅಮ್ಮ ನೀನು!
ಗೆಳೆಯ ನಾನು, ಗೆಳತಿ ನೀನು!
ಕೊಡುವುದಿದ್ದರೆ ಕೊಡು ಕಟ್ಟ ಕಡೆಗೆ
ಆ ನಿನ್ನ ಕಣ್ಣ ಹನಿಗಳನ್ನು
ಈ ನನ್ನ ಉಸಿರು ನಿಂತಾಗ, ಧನ್ಯ ನಾನು!
ee saalugalu tumbha esta aythu.. nimma sneha ananthavaagirali.....