ಇಂದು ಏಕಾಂತವೇಕೋ ಇಷ್ಟವಾಗುತ್ತಿದೆ,
ಸುಖ ಕೊಡುವುದೆಂದು ಬಯಸಿದುದೆಲ್ಲ
ಬಿಟ್ಟು ಹೋಗಿದ್ದರಿಂದಲೇನೋ...
ಮನಸ್ಸಿನ ಸಂತೋಷಕ್ಕೆಂದು ಪ್ರೀತಿಸಿದೆ,
ಪ್ರೀತಿಸಿದಾಕೆ ಪ್ರೀತಿ ಮರೆತಳು...
ಬೇಸರ ತಣಿಯಲೆಂದು ಸ್ನೇಹ ಬಯಸಿದೆ,
ಸ್ನೇಹಿತರು ಸ್ನೇಹದ ಅರ್ಥ ಮರೆತರು...
ರಕ್ತ ಸಂಬಂಧಗಳಾದರು ಕೈ ಹಿಡಿಯತ್ತವೆಂದುಕೊಂಡೆ,
ಸಂಬಂಧಿಗಳು ಅಲ್ಪ ಮನಸ್ಸಿನವರು...
ಈ ಏಕಾಂತ ನಾನೇ ಬಯಸಿ ಪಡೆದದ್ದಲ್ಲ,
ಪ್ರೀತಿಯ, ಸ್ನೆಹದ, ಸಂಬಂಧಿಗಳ ಪ್ರೀತಿಯ ಕೊಡುಗೆ,
ಆದರೂ ಏಕಾಂತವೇಕೋ ಇಂದು ಇಷ್ಟವಾಗುತ್ತಿದೆ...
ಕೇಳಿದ್ದೆ, ಓದಿದ್ದೆ ಏಕಾಂತ ಹುಟ್ಟಿಸಬಹುದು
ಒಬ್ಬ ಬಂಡುಕೋರನನ್ನೋ, ಒಬ್ಬ ಅಪರಾಧಿಯನ್ನೋ,
ಒಬ್ಬ ಅಸಹಾಯಕನನ್ನೋ, ಒಬ್ಬ ಸಮಾಜ ವಿರೋಧಿಯನ್ನೋ...
ಆದರೆ ಏಕಾಂತ ನನ್ನಲ್ಲಿ ಹುಟ್ಟಿಸಿದ್ದು ಒಬ್ಬ ಮನುಷ್ಯನನ್ನು...
ನಾನು ಎಲ್ಲರಿಂದಲೂ ಬಯಸಿದೆ,
ಪ್ರಿಯತಮೆಯಿಂದ ನಿಷ್ಕಲ್ಮಶ ಪ್ರೀತಿಯನ್ನು,
ಸ್ನೆಹಿತರಿಂದ ಸ್ನೇಹದ ಆಸರೆಯನ್ನು,
ಸಂಬಂಧಿಕರಿಂದ ಸಂಬಂಧಗಳ ಆಪ್ಯಾಯಮಾನಥೆಯನ್ನೂ...
ಏಕಾಂತ ನನ್ನಲ್ಲೂ ಹುಟ್ಟಿಸಿದೆ ಒಂದು ಪ್ರಶ್ನೆಯನ್ನು,
ಇದನ್ನೆಲ್ಲ ಬಯಸುವ ಮುನ್ನ ನಾ
ಅವರಿಗಾಗಿ ಕೊಟ್ಟ ಕಾಣಿಕೆ ಏನು...
ನಾವು ಹುಲು ಮಾನವರು ನಮ್ಮ ಜೀವನವನ್ನೇ
ಕಳೆಯುತ್ತೇವೆ ಕೇವಲ ಈ ನಿರೀಕ್ಷೆ, ಬಯಕೆಗಲಲ್ಲೆ...
ಆದರೆ ನಮ್ಮಲ್ಲಿ, ಆದರ್ಶದ ಪ್ರತೀಕವಾಗಿ
ಬದುಕುತ್ತಿದ್ದೇವೆಂಬ ಅಹಂಭಾವ...
ತ್ಯಾಗದ ಅರ್ಥ ತಿಳಿಯದ ಹೊರತು ಎಲ್ಲಿಯ ಆದರ್ಶ
ಅರ್ಪಣೆಯ ಪರಮಾರ್ಥ ತಿಳಿಯದ
ಹೊರತು ಎಲ್ಲಿಯ ಜೀವನ...
ನಿರೀಕ್ಷೆ, ಬಯಕೆಗಳನ್ನು ತ್ಯಜಿಸುವುದಲ್ಲವೇ
ಜೀವನದ ನಿಜವಾದ ಸಾರ್ಥಕತೆ,
ನಿಸ್ವರ್ಥತೆಯಲ್ಲಲ್ಲವೆ ಜೀವನದ ನಿಜವಾದ ಪರಮಾರ್ಥ...
ಇಷ್ಟೆಲ್ಲವನ್ನು ತಿಳಿಸಿದ ಏಕಾಂತವೇ ನಿನಗಿದೋ ಪ್ರಣಾಮ
ಜೀವನದ ಸಾರ್ಥಕತೆಯ ಅರ್ಥಮಾಡಿಸಿ
ಪರಮಾರ್ಥದಲ್ಲಿ ಮನುಷ್ಯತ್ವವನ್ನು ಗುರುತಿಸಿದ್ದರಿಂದಲೇ
ಇಂದು ಈ ಏಕಾಂತವೇಕೋ ನನಗೆ ಇಷ್ಟವಾಗುತ್ತಿದೆ...
- ಪ್ರಸಾದ್.ಡಿ.ವಿ.
ನಮ್ಮ ಬದುಕಿನಾ ನಿಜವಾದ ಅರ್ಥವನ್ನು ತಿಳಿದುಕೊಳ್ಳೋಕೆ ಮತ್ತು ತನ್ನವರ ಬಗ್ಗೆ ಅರಿಯೋಕೆ ಸಾಧ್ಯವಾಗೋದು ಏಕಾಂತದಲ್ಲಿ ಮಾತ್ರ..!
ReplyDeleteಹಾಗೆ ನಾವಾಗಿಯೇ ಏಕಾಂತವನ್ನು ಬಯಸಿದಾಗ ಅದು ಮನಸ್ಸಿಗೆ ಒಂದು ರೀತಿಯ ಹಿತಕರವಾದ ಸುಖವನ್ನ ಕೊಡುತ್ತೆ..! ಆದರೆ ಇತರರಿಂದ ಪಡೆದಾಗ ಮಾತ್ರ ತುಂಬಾ ನೋವುಂಟು ಮಾಡುತ್ತೆ..!:(:(
ಸತ್ಯವಾದ ಮಾತು.. ನಾನು ಎರಡೂ ಪರಿಸ್ಥಿತಿಯನ್ನು ಅನುಭವಿಸಿದ್ದೇನೆ.. ಮತ್ತೆ ಅದಕ್ಕೆ ಹೊಂದಿಕೊಂಡುಬಿಟ್ಟಿದ್ದೇನೆ..:)) ಏಕಾಂತವಾಗಿದ್ದಾಗ ಲೈಫ್ ಬಗ್ಗೆ ತಿಳಿಯೋ ಪ್ರಯತ್ನ ಮಾಡ್ತೇನೆ, ಇತರರಿಂದ ಏಕಾಂತ ಪಡೆದಾಗ ಸುಮ್ಮನೆ ಮೌನಕ್ಕೆ ಶರಣಾಗಿ ಬಿಡ್ತೇನೆ.. ಮೌನ ಆತ್ಮಶಕ್ತಿಯನ್ನು ಎಚ್ಚಿಸುತ್ತದೆ.. ನನ್ನ ಪ್ರಕಾರ ತಪ್ಪು ಮಾಡಿದವರನ್ನು ತಕ್ಷಣವೇ ಕ್ಷಮಿಸಿ ಬಿಡಬೇಕು, ಆ ಕ್ಷಮೆ ಅವರನ್ನು annoy ಮಾಡುವಷ್ಟು ಬೇರೇನು annoy ಮಾಡಲ್ಲ..:D ಹ್ಹ ಹ್ಹ ಹ್ಹ ಹ್ಹಾ.. ಅನ್ನಿಸಿದ್ದನ್ನ ತಕ್ಷಣಕ್ಕೆ ಪ್ರತಿಕ್ರಿಯಿಸುವುದು ನಂತರದಲ್ಲಿ ಎಲ್ಲವನು ಮರೆತು ಮತ್ತೆ ಎಲ್ಲರನ್ನೂ ಎಂದಿನಂತೆ ಪ್ರೀತಿಸುವುದು ಇದು ನಾನು ಕಂಡುಕೊಂಡ ಜೀವನದ ದಾರಿ..:)))
ReplyDelete