ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday, 28 September 2012

ನನ್ನ ಮುದ್ದು




ಮುದ್ದು ಮುದ್ದಾದ ಮನಸ್ಸಿಗೆ,
ಪೆದ್ದು ಪೆದ್ದಾಗಿ ಕೇಳಿದ್ದೆ,
ಹಕ್ಕಿಗಳಾಗುವ ಬಾರೆ,
ಬಾನೆತ್ತರಕ್ಕೆ ಹಾರಿ ಪುರ್ರೆಂದು..
ಚುಕ್ಕಿ ಚಂದ್ರಮರಂಕಿತವ ತರುವ
ನಮ್ಮ ಪ್ರೀತಿಗೆ..!
ಒಂದು ತುದಿಯಲ್ಲಿ ನೀನು,
ಇನ್ನೊಂದರಲ್ಲಿ ನಾನು..!

ನನ್ನವಳು ಜಾಣೆ,
ಕೇಳಬೇಕವಳ ಉತ್ತರವ ನೀವು,
ಹಕ್ಕಿಗಳಾಗುವ ನಲ್ಲ,
ಅಡ್ಡಿಯಿಲ್ಲ, ಕೈಯಲ್ಲಿ ಕೈ ಹಿಡಿದು,
ನೀ ಜೊತೆಗಿದ್ದರೆ ಸಾಕು,
ನನಗೆ ಬೇರೇನು ಬೇಕು?
ಚುಕ್ಕಿ ಚಂದ್ರಮನಲ್ಲೇ
ಮನೆ ಮಾಡಿ ನೆಲೆಯಾಗಬೇಕು..!

ಅವಳೋ ಮುದ್ದು ಮುದ್ದು,
ನಾನೋ ಪೆದ್ದು ಪೆದ್ದು,
ಉಕ್ಕುತ್ತಿದ್ದ ಪ್ರೀತಿಗೆ
ಅವಳ ಗಲ್ಲ ಹಿಡಿದೆತ್ತಿ
ಹೂ ಮುತ್ತು ನೀಡಿದ್ದು ಬಿಟ್ಟರೆ
ಇನ್ನೇನೂ ಮಾಡಿಲ್ಲ ನಾನು..!
ನಾನೋ ಪೆದ್ದು ಪೆದ್ದು,
ಅವಳೋ ನನ್ನ ಮುದ್ದು..!

- ಪ್ರಸಾದ್.ಡಿ.ವಿ.

1 comment:

  1. ವಾರ್ರೆವ್ವಾ.. ಸುಪೆರ್ರೋ ಸೂಪರ್...
    ನೀವೋ ಪೆದ್ದು ಪೆದ್ದು... ಅವರೋ ಮುದ್ದು ಮುದ್ದು..

    ಮುದ್ದಾಗಿದೆ ಕವಿತೆ....

    ReplyDelete