ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday, 1 August 2012

ದೀಪ ಹಚ್ಚುತ್ತೇನೆ



ಕಗ್ಗತ್ತಲ ಬಾಳಿನಲ್ಲೊಮ್ಮೆ
ಅಂತರಂಗದಂಗಳದಲಿ
ದೀಪ ಹಚ್ಚುತ್ತೇನೆ,
ಸುಮ್ಮನಾದರೂ ಒಮ್ಮೆ..!

ಬಿಕ್ಕಳಿಸಿ ಬಸವಳಿದ
ತುಟಿ ಹಾರದ ಮಾತುಗಳಿವೆ,
ಕಂಬನಿಯ ತಳದಿ
ಕೈಕಟ್ಟಿ ಕುಳಿತ ಕನಸುಗಳಿವೆ,
ದೀಪ ಹಚ್ಚುತ್ತೇನೆ,
ಮೌನ ಮಾತಾಗಲಿ,
ಕನಸು ಕಂಗೊಳಿಸಲಿ..!

ನಿರಾಸೆಯ ಸೆರಗಲ್ಲಿ
ಸೊರಗಿರುವ ಆಸೆಗಳಿವೆ,
ನೀಲಿಯಲ್ಲಿ ತೇಲಿ ಹೋದ
ಅಮೂರ್ತ ರೂಪಕಗಳಿವೆ,
ದೀಪ ಹಚ್ಚುತ್ತೇನೆ,
ಆಸೆ ಚಿಗುರಾಗಲಿ,
ರೂಪಕಗಳುಸಿರಾಡಲಿ..!

ಹಮ್ಮಿನಲ್ಲಿ ಬಿಮ್ಮಿನಲ್ಲಿ
ಹೊರಬಿದ್ದ ಬಿರುನುಡಿಗಳಿವೆ,
ಬೀಳಲಾರೆನೆಂಬ ಕೋಟೆಯೊಳಗೆ
ಅಹಮ್ಮಿನ ಅಹಂಕಾರಗಳಿವೆ,
ದೀಪ ಹಚ್ಚುತ್ತೇನೆ,
ಬಿರುನುಡಿ ಕರಗಿ ತಿಳಿಯಾಗಲಿ,
ನಾನೆಂಬುದು ಕೃಷ್ಣನ
ಪಾದಕಮಲದಡಿಯ ಕಣವಾಗಲಿ..!

- ಪ್ರಸಾದ್.ಡಿ.ವಿ.

3 comments:

  1. ಆಹಾ .. ಅತೀ ಸೊಗಸು .. ಮಂಜಿನ ಹನಿಯಲ್ಲಿ ಹಚ್ಚಿದ ದೀಪ , ಅದರ ಬೆಳಕಿನ ಶಾಖವನ್ನು ಹರಡಿ , ಮನಸ್ಸನ್ನು ತಂಪು ತಂಪು ಮಾಡಿಸುತ್ತಿದೆ .. :)

    ReplyDelete
  2. ಸ್ವತಃ ಮನೋ ದೀಪ ಬೆಳಗಿಸಿಕೊಳ್ಳುವ ಈ ಕಲ್ಪನೆ ನನಗೆ ಮೆಚ್ಚುಗೆಯಾಯಿತು.

    ReplyDelete
  3. ಕುಸಿದು ಹೋದ ಬಾಳು ಹೇಗೆ ತನಗೆ ತಾನು ಅಂತರಂಗದ ದೀಪ ಹಚ್ಚಿ ಬೆಳಗಬೇಕು, ಮೇಲೇಳಬೇಕು ಎಂಬುದರ ಬಗ್ಗೆ ಸುಂದರ ಕವನ...
    ಸ್ಫೂರ್ತಿದಾಯಕ ಕವಿತೆ.....ಚೆನ್ನಾಗಿದೆ ಪ್ರಸಾದ್...

    ReplyDelete