ಆಫೀಸಿನ ಕ್ಯಾಬಿನ್ ಗಳಿಗೆ
ಗಾಳಿ ಊದಿ, ಆಕ್ಸಿಜನ್ ತುಂಬಿಸಿಟ್ಟಳೋ ಏನೋ?
ಉಸಿರಾಡುವ ಕಣ ಕಣದೊಳಗೂ
ಅವಳದೇ ಘಮ,
ಮನಸು ಜಾರಿದ ಇಳಿಜಾರು
ಓಣಿಯಲಿ
ಆಕೆಯ ಒಂದು ನಗು ಸಿಕ್ಕರೂ
ಸಾಕು ಸಾಕು.
ಸಾಕಪ್ಪ ಸಾಕಲ್ಲ,
ಇಷ್ಟಾದರೂ ಸಿಕ್ಕಿತಲ್ಲ, ಆ ಸಾಕು!
ಮೊನ್ನೆ ಆಫೀಸಿಗೆ ಬರದದ್ದು
ಎದೆಯನ್ನು ಅದೆಷ್ಟು ಬಣಗುಡಿಸಿಬಿಡ್ತು.
ವರ್ಕ್ ಫ್ರಂ ಹೋಮ್ ಮಾಡಿರಬೇಕು,
ಮನಸ್ಸದನ್ನು ಕೇಳಬೇಕೆ?
ಹುಡುಕುವುದು,
ಆ ಕಡೆ, ಈ ಕಡೆ ನೋಡುವುದು
ಮತ್ತೆ ಕೆಲಸದಲ್ಲಿ ತಲ್ಲೀನ!
ಎದೆ ತೋಯಿಸುವ ನೀರವ ಮೌನ,
ಕೆಲಸ ಮೌನ ತಲ್ಲೀನ!
ಮತ್ಯಾರೋ ಲ್ಯಾಬ್ ನೊಳಗೆ
ಆಕೆಯ ಹೆಸರು ಕೂಗಿದಂತಾಗಿ
ತಿರುಗಿ ನೋಡಿದೆ,
ಅಲ್ಲಿ ಅವಳ ಹೆಸರು ಕೂಗಿದವರೂ ಇಲ್ಲ,
ಆಕೆಯೂ ಇಲ್ಲ,
ಇದೆಂತಹ ಭ್ರಮೆ?
ಗಮನ ಮತ್ತೆಲ್ಲೋ ತೇಲುವಾಗ
ಊಹಿಸಿಕೊಳ್ಳುವ
ಊಹೆಗಳಿಗೆಲ್ಲಿ ಕ್ಷಮೆ?
ಇವತ್ತು ಆಫೀಸಿಗೆ ಬಂದಿದ್ದಳು,
ಮತ್ತೆ ಕ್ಯಾಬಿನ್ ನ ಗಾಳಿಗೆ
ಅವಳದೆ ಘಮ,
ಒಂದಷ್ಟು ಹರಟಿ,
ಒಂದೆರಡು ಜೋಕ್ ಕಟ್ ಮಾಡಿ
ಅವಳು ನಕ್ಕರೆ,
ಅವಳು ಕ್ರಷ್ಷರ್ ಆಗುವುದು,
ನಾನು ಕ್ರಷ್ ಆಗುವುದು
ನಡೆದೇ ಇರುತ್ತದೆ!
~ ಮಂಜಿನ ಹನಿ

No comments:
Post a Comment