ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Monday, 15 July 2013

ಕಾದಿಹ ರಾಧೆ!



ಮಧುರೆಗೆ ಹೋದೆಯಾ ಮಾಧವ,
ತೊರೆದು ನೆರಳಂತಹ ರಾಧೆಯಾ,
ತಾನ್ ತುಳಿದ ಮಣ್ಣ ವಾಸನೆಯರಿಯದೆ
ಪಾದ, ಮರಳಿ ಬರುವ ಹಾದಿಯ ಮರೆತು,
ಅಳುತಿಹಳು ಕೃಷ್ಣಮಯಿ ನಿನಗೇ ಸೋತು!                           !!ಮಧುರೆಗೆ ಹೋದೆಯಾ!!

ಉಳಿದ ಮಾತುಗಳ ಮಾಲೆಯೊಸೆದಳು,
ಕೊರಳೊಡ್ಡಬಾರದೇ ಮುರುಳಿ,
ಸುಳಿದ ರಾಗಗಳು ಝೇಂಕಾರದ ಸುರುಳಿ,
ಕಾದೇ ಕಾದಳು ಬೃಂದಾವನದಲಿ,
ಬರುವೆಯೋ ಬಾರೆಯೋ, ಹೇಳೆಯಾ?                                !!ಮಧುರೆಗೆ ಹೋದೆಯಾ!!

ಜೀವದುದ್ದಕ್ಕೂ ಬೆಳಕು ಕೊಟ್ಟಂತೆ
ಹೋದವನಿಗೆ ಹಚ್ಚಿಟ್ಟ ಹಣತೆ,
ಕರಗುತಿರುವಳು ಕರ್ಪೂರದಂತೆ,
ಭ್ರಮೆಯಾಗಿಸಬೇಡವಳ ಪ್ರೇಮವ,
ಬಂದು ಸೇರೋ ಕಾದಿಹ ರಾಧೆಯ!                                    !!ಮಧುರೆಗೆ ಹೋದೆಯಾ!!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್

3 comments:

  1. ಒಮ್ಮೆ ಹಾಡಿನಂತೆಯೂ ಹಾಡಿಕೊಂಡೇ, ಮನದೊಳಗೆ ರಾಧಾ ಮಾಧವರೇ ತುಂಬಿ ಹೋದರೂ.
    http://badari-poems.blogspot.in

    ReplyDelete
  2. aa raadhe nimma kanasalli bandu nova todikondate idae ha ha ha chanda idae

    ReplyDelete
  3. ಪ್ರೇಮದ ನಿವೇದನೆಯ ದೈನ್ಯತೆ, ಬೇಡುವ ಪರಿ ಮನೋಜ್ಞವಾಗಿದೆ..
    ಬಹಳ ದಿನಗಳ ನಂತರ ಸುಂದರ ಕವನ ಓದುವ ಅವಕಾಶ ಲಭ್ಯಾವಾಯಿತು..:)

    ReplyDelete