ದೇವರು ಹುಟ್ಟುತ್ತಾನೆ
ನನ್ನೊಳಗೂ, ನಿನ್ನೊಳಗೂ,
ನಮ್ಮೆಲ್ಲರೊಳಗೂ
ದೇವರು ಹುಟ್ಟುತ್ತಾನೆ!
ಅವರವರ
ವ್ಯಾಖ್ಯಾನಗಳವರವರಿಗೆ!
ಒಬ್ಬರಿಗೆ ದೇವರು
ಗುಡಿಯಳೊಗವಿತು ಕುಳಿತರೆ,
ಮತ್ತೊಬ್ಬರಿಗೆ
ಮಸೀದಿಯ ನಾಲ್ಕು
ಗೋಡೆಗಳೊಳಗೆ ಜೀವಂತ!
ಮಗದೊಬ್ಬರಿಗೆ
ದೇವಾತ್ಮ ಶಿಲುಬೆಗೇರಿ
ಚರ್ಚಿನೊಳು ಬಂಧಿ!
ನನ್ನ ದೇವರು:
ಮಸೀದಿಯೊಳು ನೆಲೆ ನಿಂತ
ಯೇಸುವಿನ ಹೃದಯದೊಳು
ಶ್ರೀ ಕೃಷ್ಣ ತಾನಾಗಿದ್ದಾನೆ!
ಅಲ್ಲಿ ನಿಲ್ಲುವುದಷ್ಟೇ ಅಲ್ಲ
ನನ್ನ ಆತ್ಮನೊಳಗೂ
ಬೆರೆತುಬಿಟ್ಟಿದ್ದಾನೆ!
ನನ್ನನ್ನೀಗ ಕಾಡುವ ಪ್ರಶ್ನೆ:
ನಾನ್ಯಾವ ಧರ್ಮ?
ನನ್ನ ದೇವರಿಗೇನು ಹೆಸರು?
- ಪ್ರಸಾದ್.ಡಿ.ವಿ.
ಚಿತ್ರ ಕೃಪೆ: ಗೂಗಲ್ ಅಂತರ್ಜಾಲ
ಗುಡಿ, ಚರ್ಚು, ದರ್ಗಾಗಳ ಗಡಿಯೊಳಗಿಲ್ಲ, ಜಾತಿ, ಮತ, ವರ್ಣಗಳ ಮಿತಿಯೊಳಗಿಲ್ಲ!
ReplyDeleteಆ ಕಾಣದವನು! ಕಂಡರೂ ಕಾಣದವನು!
ಉತ್ತಮ ಕವಿತೆ .ನನ್ನ ದೇವರಿಗೇನು ಹೆಸರು?
ReplyDeleteದೇವರು ವಾಸ್ತವವಾಗಿ ಇಲ್ಲ
ಪ್ರಕೃತಿಯೇ ದೇವರು
ಮನುಜರು ದೇವರಂತಾಗಲು ಪ್ರಯತ್ನಿಸಬೇಕು.
ನಮ್ಮೊಳಗೇ ದೈವತ್ವ ಇರಬೇಕು
ಮೊದಲು ಮಾನವ ಧರ್ಮ, ಉಪಕರಿಸಿದವನೇ ನಿಜ ದೇವರು ನನ್ನ ಪಾಲಿಗೆ. ಸೋತಾಗ ಬೆನ್ನು ತಟ್ಟಿದವರು, ಹಸಿದಾಗ ತುತ್ತು ಅನ್ನ ಕೊಟ್ಟವರು, ಕೆಲಸ ಕಳೆದುಕೊಂಡು ಇನ್ನೂ ಜನ್ಮದಲ್ಲಿ ಮತ್ತೆ ಕ್ಯಾಮರಾ ಮುಟ್ಟುತ್ತೇನೋ ಇಲ್ಲವೋ ಎಂದು ಅಲವತ್ತು ಕೊಂಡಾಗ ಮತ್ತೆ ಕ್ಯಾಮರಾ ಕೆಲಸಕೊಟ್ಟ ಜೋಶಿ ಇವರೇ ನನಗೆ ನಿಜವಾದ ದೇವರು.
ReplyDeleteನನ್ನ ದೇವರಿಗೇನು ಹೆಸರು? ಸುಂದರ ಉಪಮೆಯೊಂದಿಗೆ ಹೀಗೆ ಪ್ರಶ್ನಿಸಿಕೊಳ್ಳುವ ಕವಿಗೆ ದೇವರು ಸರ್ವಾಂತರ್ಯಾಮಿ ಎಂಬ ತಿಳುವಳಿಕೆಯೂ ಇದೆ.ಜೊತೆಗೆ ದೇವರು 'ಅಲ್ಲಿ ನಿಲ್ಲುವುದಷ್ಟೇ ಅಲ್ಲ
ReplyDeleteನನ್ನ ಆತ್ಮನೊಳಗೂ
ಬೆರೆತುಬಿಟ್ಟಿದ್ದಾನೆ!' ಎಂದುಕೊಳ್ಳುವಾಗ ಎಲ್ಲೋ ಜಿಜ್ಞಾಸುವಿಗೆ ಒಳಗಾದಂತೆ ತೋರುತ್ತದೆಯಾದರೂ ಕವಿತೆ ಸುಂದರವಾಗಿದ್ದು ಓದಿಸಿಕೊಳ್ಳುತ್ತೆ.