ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday, 22 January 2013

ಅಂತರಾತ್ಮ!




ಉಕ್ಕುಕ್ಕುವ ಗಂಗೆಯನ್ನು
ಹೇಗೆ ತಾನೇ ಒತ್ತಿ ಹಿಡಿಯಲಿ ನಾನು,
ಹರಿವುದದರ ಕ್ರಮ!
ಹರಿದು ತನುವನ್ನು ಹಗುರ ಮಾಡುವ
ಆತ್ಮಕ್ಕೆ ಸಾವಿರ ಪ್ರಣಾಮ!

ಮಾನವ, ದಾನವ, ತನ್ನೊಳಗೇ ದೈವಾ,
ಎಲ್ಲ ಅವತಾರವನ್ನೂ ಎತ್ತಿದ ಮೇಲೆ
ತನ್ನಿಂತಾನೇ ತಟಸ್ಥ!
ಎಲ್ಲಾ ಭಾವಗಳಿಗೆ ಮಿಡಿದಮೇಲೂ
ಮನಸಾ ಸಮಚಿತ್ತ ಭಾವ ಸ್ವಸ್ಥ!

ಮುಚ್ಚು ಮರೆಯಿರದೆ, ಮಡಿ ಮೈಲಿಗೆಯುಡದೆ
ಪೂರ್ವಾಪರಗಳ ಗೊಡವೆಯಿರದೆ
ಇದ್ದುದ್ದಿದ್ದಂತೆ ಹರವಿದೆ!
ಉತ್ತರಾಭಿಮುಖವಾಗಿ, ಸಿದ್ಧಕ್ಕೆ ಸಿದ್ಧನಾಗಿ
ಪರಿಶುದ್ಧ ಆತ್ಮನಾದ ಅಂತರಾತ್ಮ!

- ಪ್ರಸಾದ್.ಡಿ.ವಿ.

3 comments:

  1. ಆ 'ಹರಿವ' 'ಸತ್ವದೊಳಗೆ ಎಲ್ಲವೂ 'ಶುದ್ಧ'ವಾಗಲಿ! ಚೆನ್ನಾಗಿದೆ ರಚನೆ

    ReplyDelete
  2. ಈ ಕವಿತೆ ತುಂಬಾ ಇಷ್ಟ ಆಯ್ತು.
    "ಮುಚ್ಚು ಮರೆ ಇಲ್ಲದೆ .." ಕವಿತೆಯನ್ನ ಜ್ಞಾಪಿಸಿತು

    ReplyDelete
  3. ಈ ಕವಿತೆ ತುಂಬಾ ಇಷ್ಟವಾಯಿತು.ಕವಿದರ್ಶನ ಚೆನ್ನಾಗಿದೆ.

    ReplyDelete