ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Monday, 15 October 2012

ಆವರಿಸೆನ್ನ ಓ ಗುರುವೇ ಅಂತರಾತ್ಮ




ಅರಿವಿನಣುವಣುವನ್ನೂ ಬಿಡದೆ ಆವರಿಸು
ಸಾಕ್ಷಾತ್ಕಾರಕ್ಕೆ ಕಾದಿರುವೆನುದ್ಧರಿಸು
ಓ ಗುರುವೇ ಕರಪಿಡಿದು ನಿಂತಿರುವೆ
ಕೈಹಿಡಿದು ನಡೆಸೆನ್ನ ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

ನಾನು-ನಾನೆಂಬ ನಂದಿಸೆನ್ನನು
ನಂದದಿರುವ ನಿನ್ನನೆನ್ನೊಳುಳಿಸಿನ್ನು
ಓ ಗುರುವೇ ಜಗದರಿವೇ
ಕೃಷ್ಣನೊಲವೇ ನೀ ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

ದೀಪದ ತಳದಂಧಕಾರವಳಿಸುವವನು
ಆತ್ಮನಲ್ಲೇ ಪರಮಾತ್ಮನ ನೆಲೆಗೊಳಿಸುವನು
ಓ ಗುರುವೇ ಶರಣು ನಾನು
ಆತ್ಮನೊಳಗಿನಾತ್ಮ ನೀನು ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

- ಪ್ರಸಾದ್.ಡಿ.ವಿ.
--------------------------------------------------------------------------------------
ಗುರುವಿನ ಪಾದತಲದಲ್ಲಿ ಮೊದಲ ಕಮಲ

2 comments:

  1. ಲಯಬದ್ಗವಾದ ಬಾವ ಪ್ರಸ್ತುತಿ.ಮನೋಹರವಾಗಿದೆ.ಅರಿವೆ ಗುರುವಾಗುವ ಬಗೆಯ ಭಾವಪೂರ್ಣ ನಿರೂಪಣೆ ಇದು.ಲಹರಿಯು ಸಮ್ಮಿಳಿತಗೊಂಡು ಗಾನವಾಗಿದೆ.

    ReplyDelete
  2. ಪ್ರಸಾದ್.. ಬಹುಷಃ ನಿಮಗೆ ಏನೋ ಸಿದ್ಧಿಯಾಗಿದೆ! ಜ್ಞಾನೋದಯ ಲಭಿಸಿದಂತಿದೆ. ತನ್ಮಯ ಈ ಕರೆಗೆ!

    ReplyDelete