ಅರಳು ಮಲ್ಲಿಗೆಯ
ಗಮದ ಪರಿಮಳಕೆ
ಅರಳಿ ನಿಂತವನು ನಾನು,
ಅರಳಿಸಿದ ಮಲ್ಲಿಗೆಯು ಬಾಡಲೇಕೆ?
ಬಾಡುವ ಮುನ್ನ ಹೃದಯ
ಕಮಲ ಸೇರಬಾರದೇಕೆ?
ನಿನ್ನ ತಲೆ ನೇವರಿಸಿ,
ಮುಂಗುರುಳ ಬಳಿ ಸರಿಸಿ,
ಹಣೆಗೊಂದು ಮುತ್ತಿಡಲೆ ನಲ್ಲೆ,
ಮುದುಡಬಾರದು ಮಲ್ಲಿಗೆ,
ಬೆದರಿ ಭಯದೊಳಗೆ,
ತಿಳಿಯಾಗಿ ಬೀಸಲಿ ಪ್ರೀತಿಯ ತಿಳಿಗಾಳಿ,
ಮೆಲ್ಲಗೆ, ತುಸು ಮೆಲ್ಲಗೆ..!
ಮುನಿಸೂ ಬಿಸಿಯಾಗಿ,
ಕನಸೂ ಹಸಿಯಾಗಿ,
ನಿನ್ನದೇ ಧ್ಯಾನ ಈ ಮನಕೆ,
ಅರಿಯಬಾರದೆ ಹುಸಿಮುನಿಸ ಪರದೆ,
ಹುಣ್ಣಿಮೆಯ ದಿನದೆ ಸಾಗರವೂ
ಉಕ್ಕುಕ್ಕಿ ದಡ ಸೇರುವ ತೆರದಿ..!
- ಪ್ರಸಾದ್.ಡಿ.ವಿ.
ಪರಿಮಳ ಬೀರುವುದೆಂದರೆ ಹೀಗೆ ಪ್ರಸಾದ್. ಮನದೊಳಗಿನ ಒಲವ ಗುಲಾಬಿ ಅರಳಿ ನಗಬೇಕು. ಬದುಕಿನಂಗಳದಿ ಪರಿಮಳ ಸೂಸಿ ಮೂಗುಗಳು ಆಘ್ರಾಣಿಸಬೇಕು. ಅಂದು ಒಲವಿಗೆ ಮೋಕ್ಷ!
ReplyDeleteಸ್ವಗತದಲಿನ ಪ್ರೇಮದಲೆ ಬಹು ಬಹು ಸುಂದರ.
ಸ್ವಲ್ಪ ದಿನಗಳ ನಂತರ ನಿಮ್ಮ ಕವಿತೆ ನೋಡುತ್ತಾ ಇದ್ದೀನಿ!
ReplyDeleteತುಂಬಾ ಚೆನ್ನಾಗಿದೆ ಎಲ್ಲವೂ ಕಣ್ಣ ಮುಂದೆ ನಡೆಯುವ ಹಾಗೆ ಅನುಭವ ಆಗುತ್ತೆ!