ಉಸಿರಾಟದಿ ಒಳ ಸೇರಿ
ಶ್ವಾಸ ನಾಳದೊಳಿಳಿದು
ದೇಹ ಸೇರಿದ ಪ್ರಾಣವಾಯು,
ಹೊರಗೆ ಹಾರಿದಿಂಗಾಲದನಿಲ,
ಊದಿಕೊಂಡಿತ್ತು ಶ್ವಾಸನಾಳ!
ಉಚ್ಛ್ವಾಸ-ನಿಶ್ವಾಸಗಳಿವು,
ಜೀವದಲ್ಲಷ್ಟೆ ಅರಳುವವು!
ದೇಹದಲ್ಲಿ ಪ್ರಾಣವಾಯುವನ್ನು
ಬೆರೆಸಲೆಂದೇ ಹೃದಯ ತಾ ಬಡಿಯುತ್ತದೆ!
ರಕ್ತದೊಳ ಪ್ರಾಣವಾಯು
ದೇಹದಣುವಣುವನ್ನೂ ಸೇರಿದರೆ ಲಬ್!
ಇಂಗಾಲದನಿಲ ಹೊತ್ತುತರುವಾಗ ಡಬ್!
ಹೃದಯದ ಕವಾಟಗಳವು
ಮುಚ್ಚಿಕೊಂಡು ಬಿಚ್ಚಿಕೊಳ್ಳುವವು!
ಜೀವವಿಲ್ಲದೆ ಬರಿಯ ಬೂದಿಯೂ
ಮಾನವನ ದೇಹವಿದು,
ದೇಹಕ್ಕೆ ಜೀವ ತುಂಬಿ,
ಅದರೊಳಗೆ ಆತ್ಮನಿರಿಸಿ,
ತಾನೂ ಒಳ ಸೇರಿಬಿಟ್ಟ ಅವನು!
ಜಪಿಸುತ್ತೇನೆ ಕೃಷ್ಣಾರ್ಪಣಂ
ಪ್ರತಿಯೊಂದು ಉಚ್ಛ್ವಾಸ ನಿಶ್ವಾಸದೊಳಗೆ!
- ಪ್ರಸಾದ್.ಡಿ.ವಿ.
ಚೆನ್ನಾಗಿದೆ :-)
ReplyDeleteಜೀವಶಾಸ್ತ್ರ + ಕವಿತೆ ! :-)
ಉಸಿರಾಟದಿ ಒಳ ಸೇರಿ
ReplyDeleteಶ್ವಾಸ ನಾಳದೊಳಿಳಿದು
ದೇಹ ಸೇರಿದ ಪ್ರಾಣವಾಯು,
ಹೊರಗೆ ಹಾರಿದಿಂಗಾಲದನಿಲ,
ಊದಿಕೊಂಡಿತ್ತು ಶ್ವಾಸನಾಳ!
ಉಚ್ಛ್ವಾಸ-ನಿಶ್ವಾಸಗಳಿವು,
ಜೀವದಲ್ಲಷ್ಟೆ ಅರಳುವವು!
ಸದಾ ನಿಮ್ಮ ಕವನಗಳು ಹೊಸ ರೀತಿಯಾಗಿ ಕಾಣುತ್ತೆ ನನಗೆ!
ಪದಗಳ ಜೊತೆ ಆಟವಾಡಿದ್ದೀರಿ ಬಿಡಿ ಗೆಳೆಯ!
ಹಿಡಿಸಿತು!
ಸೂಕ್ಷ್ಮ ವಿಚಾರವನ್ನೇ ಅಲ್ಲದೆ ಮತ್ತೊಂದು ವಿಚಾರವನ್ನೂ ನೋಡಬೇಕು. ಪ್ರತೀ ಜೀವಿಯೂ ಈ ಜಗತ್ತಿಗೆ ಬಂದಾಗ ಮೊದಲು ಪಡೆದುಕೊಳ್ಳುವುದು ಒಂದು ಉಸಿರು. ಈ ಜಗತ್ತನ್ನು ಬಿಟ್ಟು ಹೋಗುವಾಗ ಕಡೆಯದಾಗಿ ಬಿಟ್ಟುಕೊಡುವುದು ಒಂದು ಉಸಿರು. ಒಳಗೆ ಹೋದ ಒಂದು ಉಸಿರು ಹೊರಗೆ ಬಾರದಿದ್ದರೆ ಅಥವಾ ಹೊರಗೆ ಹೋದ ಒಂದು ಉಸಿರು ಮತ್ತೆ ಒಳಗೆ ಹೋಗದಿದ್ದರೆ, ಜೀವಿಯ ಜೀವನ ಅಂತ್ಯ. ಇಷ್ಟೊಂದು ಸೂಕ್ಷ್ಮ ಜೀವನವನ್ನು ಬಾಳುತ್ತಾ, ಎಲ್ಲವನ್ನೂ " ಪ್ರಸಾದ್" ಅವರು ಹೇಳಿದ ಹಾಗೆ "ಕೃಷ್ಣಾರ್ಪಣಮಸ್ತು " ಎಂದು ಇರಬೇಕೆನ್ನುವ ಮಾತು ಬಹಳ ಹಿಡಿಸಿತು.
ReplyDelete